Playstore Icon
Download Jar App
Financial Education

ನಿಮ್ಮ ಹದಿವಯಸ್ಸಿನವರಿಗೆ ಹಣದ ಬಗ್ಗೆ ಕಲಿಸುವುದು ಹೇಗೆ

December 30, 2022

ನಿಮ್ಮ ಹದಿವಯಸ್ಸಿನವರೊಂದಿಗೆ ಹಣದ ಬಗ್ಗೆ ಮಾತನಾಡಲು ಭಯಪಡುತ್ತೀರಾ? ಹೆದರಬೇಡಿ. ನಾವು ನಿಮ್ಮೊಂದಿಗಿದ್ದೇವೆ. ನಿಮ್ಮ ಹದಿಹದೆಯರೆಯದವರಿಗೆ ಹಣದ ಬಗ್ಗೆ ಎಲ್ಲವನ್ನೂ ತಿಳಿಸಲು ಇಲ್ಲಿವೆ 6 ದಾರಿಗಳು.

ಪೋಷಕರಾಗಿರುವುದು ಸುಲಭವೇನಲ್ಲ. ವಿಶೇಷವಾಗಿ ನಿಮ್ಮ ಮಗು ಹದಿಹರೆಯಕ್ಕೆ ತಿರುಗಿದಾಗ. ನೀವು ಈ ಕೆಲ ವರ್ಷಗಳಿಗೆ ಕಾಯುತ್ತಿರುತ್ತೀರಿ ಅಥವಾ ಅದರಿಂದ ಭಯಭೀತರಾಗಿರುತ್ತೀರಿ.

ನೀವು ಯಾವುದೇ ಬದಿಯಲ್ಲಿದ್ದರೂ, ನಿಮ್ಮ ಮಗುವುಗೆ ಮುಖ್ಯವಾಗಿರುವ ವಿಷಯದಲ್ಲಿ ನೀವು ಅವರಿಗೆ ಸಹಾಯ ಮಾಡಲೇಬೇಕು ಎಂದು ನಿಮಗೆ ತಿಳಿದಿದೆ; ಹಣದ ವಿಷಯವೂ ಸೇರಿ.

ನಿಮ್ಮ ಹದಿಹರೆಯದವರು ಬೆಳೆಯುತ್ತಿದ್ದಾರೆ, ನಿಸ್ಸಂಶಯವಾಗಿ ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಾ. ಈ ಸಮಯದಲ್ಲಿ ಅವರು ಹೆಚ್ಚಿನ ಕಾಲವನ್ನು ಮನೆಯಲ್ಲಿರದೆ ಒಂಟಿಯಾಗಿಯೇ ಕಳೆಯುತ್ತಾರೆ.

ಆದ್ದರಿಂದ, ಅವರು ಕೂಡಾ ಪ್ರಮುಖ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಆರಂಭಿಸುತ್ತಾರೆ. 

ಹಣದ ಪ್ರಾಮುಖ್ಯತೆಯನ್ನು ತಿಳಿಯುವಲ್ಲಿ ಅವರಿಗೆ ಸಹಾಯ ಮಾಡಿ. ಸಂಪಾದಿಸುವುದು ಹೇಗೆ, ಉಳಿಸುವುದು ಹೇಗೆ, ಅದನ್ನು ಗೌರವಿಸುವುದು ಹೇಗೆ. ಈ ಕೆಳಗಿನ ಕೆಲ ವಿಷಯಗಳಿಂದ ನೀವು ಆರಂಭಿಸಬಹುದು:

ಬಯಕೆ ಮತ್ತು ಅಗತ್ಯಗಳ ನಡುವಿನ ವ್ಯತ್ಯಾಸ

ನಿಮ್ಮ ಮಗು ನಿಮಗೆ “ ನನಗೆ ಹೊಸ ಸ್ಮಾರ್ಟ್ಫೋನ್ ಬೇಕು, ಹೊಸದಾದ ವೀಡಿಯೋ ಗೇಮ್ ಬೇಕು ಎನ್ನಬಹುದು.” “ ಇದು ಅಗತ್ಯ ಎಂದು ನಿನಗೇಕೆ ಅನಿಸುತ್ತದೆ?” ಎಂದು ಅವರಲ್ಲಿ ಕೇಳಿ. ಒಂದು ಉತ್ತಮವಾಗಿ ಯೋಚಿಸಲಾದ ಉತ್ತರಕ್ಕಾಗಿ ಸಿದ್ಧವಾಗಿರಿ. 

ನಿಮ್ಮ ಮಗುವಿನ ಹತ್ತಿರ ಇದನ್ನು ಅಗತ್ಯ ಎನ್ನಲು ಮಾನ್ಯ ಕಾರಣಗಳಿರಬಹುದು, ಆದರೆ ನೀವು ತಠಸ್ಥರಾಗಿರಿ.

ಬಯಕೆ ಮತ್ತು ಅಗತ್ಯಗಳ ನಡುವಿನ ವ್ಯತ್ಯಾಸವನ್ನು ತಿಳಿಸುವಾಗ ಅವರಿಗೆ ಉದಾಹರಣೆಗಳನ್ನು ನೀಡಿ.

ನೀವು ಅವರ ಬಯಕೆಗಳನ್ನು ಪೂರೈಸುತ್ತಾ ಹೋದರೆ, ಮೊದಲಿಗೆ ಇದು ಸಮಸ್ಯೆ ಎಂದೆನಿಸದೇ ಇರಬಹುದು, ಆದರೆ ಒಮ್ಮೆ ಇದರ ಅಭ್ಯಾಸವಾಗಿ ಇದು ಅಗತ್ಯ ಎಂದೆನಿಸಲು ಆರಂಭವಾದಾಗ ಘರ್ಷಣೆ ಆರಂಭವಾಗುತ್ತದೆ. 

ಆದರೆ ಅವರ ಆಸೆಗಳು ಕ್ಷುಲ್ಲಕ ಎಂಬ ಸಂದೇಶವನ್ನೂ ನೀವು ಅವರಿಗೆ ನೀಡಬಾರದು.

ಅವರಿಗೆ ಒಂದು ಉಳಿತಾಯ ಖಾತೆಯನ್ನು ತೆರೆಯುವ ಆಯ್ಕೆಯನ್ನು ನೀಡಿ, ತಮ್ಮ ಬಯಕೆಗಳಿಗೆ ಹಣ ಉಳಿಸುವಂತೆ ಮಾಡಿ.

ಅವರಿಗೊಂದು ಬ್ಯಾಂಕ್ ಖಾತೆಯನ್ನು ತೆರೆದು ಕೊಡಿ

ನಿಮ್ಮ ಹದಿಹರೆಯದ ಮಕ್ಕಳಿಗಾಗಿ ಒಂದು ಬ್ಯಾಂಕ್ ಖಾತೆಯನ್ನು ತೆರೆಯುವುದು ಅವರ ಜೀವನದಲ್ಲಿ ಒಂದು ಮಹತ್ತರವಾದ ಪರಿವರ್ತನೆಯಾಗುತ್ತದೆ, ಹಲ್ಲನ್ನು ಕಳೆದುಕೊಳ್ಳುವುದು, ಡ್ರೈವಿಂಗ್ ಕಲಿಯುವುದು, ಇದೇ ರೀತಿ.

ಅವರು ತಮ್ಮ ಮೊದಲನೇ ಹುಟ್ಟುಹಬ್ಬಕ್ಕೆ ಪಡೆದ ಪಿಗ್ಗಿ ಬ್ಯಾಂಕ್ ಅಂತೂ ಈಗ ಅವರಿಗೆ ಹಿಡಿಸದು. ಅಂದರೆ ಇದು ವಾಸ್ತವಿಕವಾದ ಒಂದು ಬ್ಯಾಂಕ್ ಖಾತೆಯನ್ನು ತೆರೆಯುವ ಸಮಯ, ಅಲ್ಲವೇ?

ಅವರು ಇನ್ನೂ ಬಾಲಕರಾಗಿರುವ ಕಾರಣ ನೀವೊಂದು ಜಂಟಿ ಖಾತೆಯನ್ನು ತೆರೆಯಬಹುದು. ಅಥವಾ ನೀವು ಆ ಖಾತೆಯ ಸಹೀಗಾರರಾಗಿ, ಅವರ ಖರ್ಚುಗಳ ಮೇಲೆ ನಿಗಾ ವಹಿಸಬಹುದು.

ತಮ್ಮ ಖಾತೆಯನ್ನು ಹೊಂದಿಸುವುದು ಹೇಗೆ, ಖರ್ಚುಗಳನ್ನು ಗುರುತಿಸುವುದು ಹೇಗೆ ಹಾಗೂ ಉಳಿತಾಯ ಹೇಗೆ ಎಂಬುವುದರ ಬಗ್ಗೆ ಅವರನ್ನು ಶಿಕ್ಷಿಸಲು ಇದೊಂದು ಉತ್ತಮ ಅವಕಾಶವಾಗಿದೆ.

ಅವರ ಹಣವನ್ನು ನಿರ್ವಹಿಸುವುದು

ನೀವು ನಿಮ್ಮ ಮಗುವಿಗಾಗಿ ಉಳಿತಾಯ ಖಾತೆಯನ್ನು ತೆರೆದಿದ್ದರೆ, ಅವರಿಗೆ ಈ ವಯಸ್ಸಿನಲ್ಲಿ ಅದರ ನಿಯಂತ್ರಣ ನೀಡಿ.

ಅವರಿಗೆ ನಿಯಮಿತ ಉಳಿತಾಯದ ಅಭ್ಯಾಸವನ್ನು ಬೆಳೆಸಲು ಸಹಾಯ ಮಾಡಿ, ಹಾಗೂ ಯಾವಾಗ ಮತ್ತು ಏಕೆ ನೀವು ನಿಮ್ಮ ಉಳಿತಾಯಕ್ಕೆ ಕೈ ಹಾಕಬಹುದು ಎಂಬುವುದರ ಬಗ್ಗೆ ಅವರೊಂದಿಗೆ ಸಮಾಲೋಚಿಸಿ. 

ಮಕ್ಕಳು ಅವರ ಹೆತ್ತವರಿಂದ ಕಲಿಯುತ್ತಾರೆ, ಹಾಗಾಗಿ ಅವರಿಗೆ ಅನುಕರಿಸಲು ನಿಮ್ಮ ಉಳಿತಾಯದ ಹಾಗೂ ಹೂಡಿಕೆಯ ಅಭ್ಯಾಸಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.

ಅವರಿಗೆ ಒಂದು ಮಾದರಿಯಾಗಿ. ನಿಮ್ಮ ಸ್ವಂತ ಉಳಿತಾಯದ ಸಲಹೆಗಳನ್ನು ಅವರೊಂದಿಗೆ ಹಂಚಿ. ಜೇಬಿಗೆ ಕತ್ತರಿ ಹಾಕದೆಯೇ ನೀವು ಹಣದ ಉಳಿತಾಯ ಹೇಗೆ ಮಾಡಬಹುದು ಎಂಬುವುದರ ಬಗ್ಗೆ ಅನ್ವೇಷಿಸಿ.

ಬಜೆಟ್ ರಚನೆ ಹಾಗೂ ಅದರ ನಿರ್ವಹಣೆ

ಬಜೆಟ್ ರಚಿಸುವುದು ಹಾಗೂ ಅದನ್ನು ನಿರ್ವಹಿಸುವುದು ಹೇಗೆ ಎಂದು ನಿಮ್ಮ ಮಕ್ಕಳಿಗೆ ಕಲಿಸಿ. ಬಜೆಟ್ ಮಾಡುವುದು ಬೈಕ್ ಚಲಾಯಿಸುವ ಹಾಗೆ ಅಲ್ಲ ಎಂದು ಅವರಿಗೆ ಮನವರಿಕೆ ಮಾಡಿಸಿ( ಎಂದರೆ ಒಮ್ಮೆ ಕಲಿತು ಮರೆತುಬಿಡುವುದು).

ಅವರಿಗೆ ತಮ್ಮ ಎಲ್ಲಾ ಖರ್ಚುಗಳ ಹಾಗೂ ಉಳಿತಾಯಗಳ ಪಟ್ಟಿ ಮಾಡಲು ಹೇಳಿ.

ನಿಮ್ಮ ಬಜೆಟ್ ಅನ್ನು ಅವರಿಗೆ ತೋರಿಸಿ ಅವರಾಗಿಯೇ ಅದನ್ನು ಮಾಡುವಂತೆ ಆರಂಭದಲ್ಲಿ ಸಹಾಯ ಮಾಡಿ.

ಹೇಗಿದ್ದರೂ ಅವರು ತಮ್ಮ ಮೊಬೈಲ್ ಗೆ ಅಂಟಿಕೊಂಡಿರುವುದರಿಂದ, ಅವರಿಗೊಂದು ಸರಳ ಬಜೆಟಿಂಗ್ ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಡಬಾರದೇಕೆ?

ಸಾಲದ ಪರಿಣಾಮವನ್ನು ಅರ್ಥಮಾಡಿಸಿ

ಈಗ ನಿಮ್ಮ ಹದಿಹರೆಯದವರು ಕ್ರೆಡಿಟ್ ಕಾರ್ಡ್ ಬಳಸುವ ಹಾಗೂ ಸಾಲ ಮಾಡುವಷ್ಟು ಬೆಳೆದಿರದೇ ಇರಬಹುದು, ಆದರೆ ಕೆಲ ವರ್ಷದಲ್ಲಿ ಬೆಳೆಯುತ್ತಾರೆ.

ನೀವು ಎಷ್ಟು ಹಣವನ್ನು ಸಾಲಕ್ಕಾಗಿ ವ್ಯಯಿಸುತ್ತೀರಿ ಹಾಗೂ ನೀವದನ್ನು ಏಕೆ ಹೊಂದಿದ್ದೀರಿ ಎಂಬುವುದನ್ನು ನಿಮ್ಮ ಮಗುವಿಗೆ ತಿಳಿಸಿ.

ನಿಮ್ಮ ಮಗು ಕಾಲೇಜ್ ಅನ್ನು ಎದುರುನೋಡುತ್ತಿದ್ದರೆ, ಒಮ್ಮೆ ಅವರಿಗೆ 18 ವರ್ಷವಾದ ನಂತರ, ಯಾವುದೇ ಸಾಲಕ್ಕೆ ಅಥವಾ ಕ್ರೆಡಿಟ್ ಕಾರ್ಡ್ ಇತ್ಯಾದಿಗೆ ಅರ್ಜಿ ಸಲ್ಲಿಸುವ ಮುಂಚೆ ಅವರು ಅದರ ನಿಜ ಪರಿಣಾಮವನ್ನು ತಿಳಿದಿರುವುದನ್ನು ಖಚಿತಪಡಿಸಿ(ವಿಶೇಷವಾಗಿ ಶಿಕ್ಷಣ ಸಾಲ).ಆ ಸಾಲಗಳ ಕೊಡುಗೆಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿ.

ಇದರ ಜೊತೆ, ಇಂಟರ್ನ್ ಶಿಪ್, ನೌಕರಿ, ಆದಾಯ ಮತ್ತು ತೆರಿಗೆಗಳ ಬಗ್ಗೆಯೂ ಅವರ ಜೊತೆ ಸಮಾಲೋಚನೆ ನಡೆಸಿ.

ನೀಡುವುದು

ನೀಡುವುದು ತಪ್ಪೇನೂ ಅಲ್ಲ, ಅಲ್ಲವೇ? ಸಂಪಾದನೆ, ಉಳಿತಾಯ ಹಾಗೂ ಖರ್ಚು ಮುಖ್ಯವಾಗಿದ್ದರೂ, ಅಗತ್ಯದಲ್ಲಿದ್ದವರಿಗೆ, ಕಡಿಮೆ ಅದೃಷ್ಟವಂತರಿಗೆ ಸಹಾಯ ಮಾಡುವುದೂ ಮುಖ್ಯ.

ನಿಮ್ಮ ಮಗುವಿಗೆ ನೀಡುವುದರ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದನ್ನು ಹಾಗೂ ಅದನ್ನು ಮೆಚ್ಚಿಕೊಳ್ಳುವುದನ್ನು ಕಲಿಸುವುದು ನೀವು ಮಾಡಬಹುದಾದ ಒಂದು ಒಳ್ಳೆಯ ಕಾರ್ಯವಾಗಿದೆ.

ಅವರ ಭತ್ಯೆ ಅಥವಾ ಸಂಪಾದನೆಯಿಂದ ಹಣವನ್ನು ಅವರು ಏಕೆ ದಾನ ಮಾಡಬೇಕೆಂದೂ ಅವರಿಗೆ ವಿವರಿಸಿ.

ಎಳೆ ವಯಸ್ಸಿನಲ್ಲೇ ನೀವು ನಿಮ್ಮ ಮಕ್ಕಳಿಗೆ ನೀಡುವ ಮಹತ್ವ ತಿಳಿಸಿದರೆ, ಅವರಿಗೆ ಆ ಒಳ್ಳೆಯ ಅನುಭವ ನೆನಪಿನಲ್ಲಿರುತ್ತದೆ ಹಾಗೂ ಅವರು ತಮ್ಮದೇ ಆದ ಹಣವನ್ನು ನಿರ್ವಹಿಸುವಾಗ ಈ ಸಂಪ್ರದಾಯವನ್ನು ಮುಂದುವರಿಸುತ್ತಾರೆ. 

ಅವರಿಗೆ ಕೂಡಲೇ ಇದೆಲ್ಲಾ ಅರ್ಥವಾಗದಿದ್ದರೆ ಚಿಂತಿಸಬೇಡಿ, ಆದರೆ ಅವರ ಎಳೆ ವಯಸ್ಸಿನಲ್ಲಿ ನೀವು ಅವರಿಗೆ ಒಂದು ಉತ್ತಮ ಆರ್ಥಿಕ ಅಡಿಪಾಯ ಒದಗಿಸಿದ್ದಕ್ಕಾಗಿ ಅವರು ನಿಮ್ಮನ್ನು ಅಭಿನಂದಿಸುತ್ತಾರೆ. 

ನಿಮ್ಮ ಮಕ್ಕಳೊಂದಿಗೆ ಹಣದ ಬಗ್ಗೆಯ ಸಂಭಾಷಣೆಯನ್ನು ಆರಂಭಿಸುವುದು ಹೇಗೆ ಎಂದು ನೋಡಿ (ವಯಸ್ಸು 3 ರಿಂದ 13ರ ವರೆಗೆ).

Subscribe to our newsletter
Thank you! Your submission has been received!
Oops! Something went wrong while submitting the form.