Buy Gold
Sell Gold
Daily Savings
Digital Gold
Instant Loan
Round-Off
Nek Jewellery
ಚಿನ್ನದಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಮಾರಾಟ ಮಾಡುವಾಗ ಭೌತಿಕ ಹಾಗೂ ಡಿಜಿಟಲ್ ಗೋಲ್ಡ್ ಮೇಲೆ ತೆರಿಗೆ ಹೇಗೆ ಹಾಕಲಾಗುತ್ತದೆ ಎಂಬುವುದನ್ನು ತಿಳಿಯುವುದು ಅತೀ ಮುಖ್ಯವಾಗಿದೆ.
ಭಾರತೀಯರಾದ ನಾವು ಸಾಂಪ್ರದಾಯಿಕವಾಗಿ ಚಿನ್ನದ ಅತೀ ದೊಡ್ಡ ಹೂಡಿಕೆದಾರರಲ್ಲಿ ಒಬ್ಬರು ಎಂದು ನಮಗೆಲ್ಲರಿಗೂ ತಿಳಿದಿದೆ.
ಇತರ ಭೌತಿಕವಲ್ಲದ ಆಯ್ಕೆಗಳಾದ ಡಿಜಿಟಲ್ ಗೋಲ್ಡ್, ಇಟಿಎಫ್ ಗಳು, ಗೋಲ್ಡ್ ಫಂಡ್ ಗಳು ಮತ್ತು ಸವರಿನ್ ಗೋಲ್ಡ್ ಬಾಂಡ್ ಗಳ ಹೊರಹೊಮ್ಮುವಿಕೆಯಿಂದಾಗಿ, ಭಾರತದಲ್ಲಿ ಚಿನ್ನದ ಹೂಡಿಕೆಯ ಹೆಚ್ಚಳವಾಗಿದೆ.
ಈಗ ನೀವು ಭೌತಿಕ ಚಿನ್ನ ಖರೀದಿಸದೆಯೇ ಚಿನ್ನದ ಹೂಡಿಕೆಯ ಸಂಪೂರ್ಣ ಲಾಭವನ್ನು ಪಡೆಯಬಹುದು. ಡಿಜಿಟಲ್ ಚಿನ್ನದ ಹೂಡಿಕೆ ಯಲ್ಲಿ ನಮ್ಮ ವಿವರವಾದ ಕೈಪಿಡಿಯನ್ನು ಓದಿ.
ಆದರೆ ಒಬ್ಬ ಹೂಡಿಕೆದಾರನಾಗಿ, ನೀವು ಈ ಹೂಡಿಕೆಗಳಿಂದ ಲಾಭ ಗಳಿಸಿದರೆ, ಹಲವು ವರ್ಗಗಳ ಅಡಿಯಲ್ಲಿ, ನೀವು ಗಳಿಸಿದ ಲಾಭಗಳ ಮೇಲೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಚಿನ್ನದ ಲಾಭಗಳ ಮೇಲೆ ಇರುವ ತೆರಿಗೆ ಹಾಗೂ ಚಿನ್ನದ ಮಾರಾಟದಿಂದ ಬರುವ ಬಂಡವಾಳ ಲಾಭಗಳಿಗೆ ತೆರಿಗೆ ನಿಗದಿ ಪಡಿಸುವುದು ಹೇಗೆ ಎಂದು ನಿಮಗೆ ತಿಳಿದಿದೆಯೇ?
ನೀವು ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಅಥವಾ ಈಗಾಗಲೇ ಚಿನ್ನ ಹೊಂದಿದ್ದರೆ, ಭೌತಿಕ ಹಾಗೂ ಡಿಜಿಟಲ್ ಗೋಲ್ಡ್ ನ ಮಾರಾಟದ ಸಮಯದಲ್ಲಿ ಅದರ ಮೇಲೆ ತೆರಿಗೆಯನ್ನು ಹೇಗೆ ಹೇರಲಾಗುತ್ತದೆ ಎಂದು ತಿಳಿಯಿರಿ.
ಭಾರತೀಯ ತೆರಿಗೆ ಅಧಿಕಾರಿಗಳ ಪ್ರಕಾರ ಚಿನ್ನವು ಒಂದು ಇನ್ವೆಸ್ಟ್ಮೆಂಟ್ ಆಗಿದ್ದು, ಅದರಿಂದ ಬರುವ ಎಲ್ಲಾ ಬಂಡವಾಳ ಲಾಭಗಳನ್ನು ನಿವ್ವಳ ತೆರಿಗೆಯಲ್ಲಿ ಸೇರಿಸಲಾಗುತ್ತದೆ.
Jar, ನಿಮ್ಮ ಡಿಜಿಟಲ್ ಹಾಗೂ ಭೌತಿಕ ಚಿನ್ನದ ಮೇಲೆ ತೆರಿಗೆ ಆದಾಯವನ್ನು ಹೇಗೆ ಹೇರಲಾಗುತ್ತದೆ, ಎಂದು ನಿಮಗೆ ವಿವರಿಸುತ್ತದೆ.
ಚಿನ್ನವನ್ನು ಖರೀದಿಸುವ ಅತೀ ಸಾಮಾನ್ಯ ರೀತಿ ಆಭರಣ, ಚಿನ್ನದ ಬಿಲ್ಲೆಗಳು, ನಾಣ್ಯಗಳು ಮತ್ತು ಡಿಜಿಟಲ್ ಗೋಲ್ಡ್ ರೂಪದಲ್ಲಿ ಆಗಿದೆ.
ಭೌತಿಕ ಚಿನ್ನದ ಮಾರಾಟದಿಂದ ಬರುವ ಬಂಡವಾಳ ಲಾಭವನ್ನು, ಅದು ಅಲ್ಪಾವಧಿ ಅಥವಾ ದೀರ್ಘಾವಧಿ ಬಂಡವಾಳ ಲಾಭವಾಗಿದೆಯೇ ಎನ್ನುವುದನ್ನು ಆಧರಿಸಿ, ಅದರ ಮೇಲೆ ತೆರಿಗೆಯನ್ನು ಹೇರಲಾಗುತ್ತದೆ.
ನೀವು ನಿಮ್ಮ ಚಿನ್ನದ ಸ್ವತ್ತುಗಳನ್ನು(ಆಭರಣ, ಡಿಜಿಟಲ್ ಗೋಲ್ಡ್ ಅಥವಾ ನಾಣ್ಯಗಳು)ಖರೀದಿಯ ಮೂರು ವರ್ಷಗಳ ಒಳಗಾಗಿ ಮಾರಾಟ ಮಾಡಿದರೆ, ಅಂತಹ ಮಾರಾಟದಿಂದ ಆದ ಲಾಭವನ್ನು ಅಲ್ಪಾವಧಿ ಬಂಡವಾಳ ಲಾಭ ಎನ್ನಲಾಗುತ್ತದೆ.
ಇದನ್ನು ಮೂಲತಃ ನಿಮ್ಮ ವಾರ್ಷಿಕ ಆದಾಯಕ್ಕೆ ಸೇರಿಸಲಾಗುತ್ತದೆ ಹಾಗೂ ಇದರ ಪರಿಣಾಮವಾಗಿ ನೀವು, ನಿಮ್ಮ ತೆರಿಗೆ ಯಾವ ಸ್ಲ್ಯಾಬ್ ನಲ್ಲಿ ಬರುತ್ತದೆಯೋ ಅದಕ್ಕಿಂತ ಹೆಚ್ಚಾದ ತೆರಿಗೆಯನ್ನು ನೀಡಬೇಕಾಗುತ್ತದೆ.
ಇನ್ನೊಂದೆಡೆ ನೀವು ನಿಮ್ಮ ಆಭರಣ, ಡಿಜಿಟಲ್ ಗೋಲ್ಡ್ ಅಥವಾ ನಾಣ್ಯಳನ್ನು ಖರೀದಿಯ ಮೂರು ವರ್ಷಗಳ ನಂತರ ಮಾರಾಟ ಮಾಡಿದರೆ, ಅಂತಹ ಮಾರಾಟದಿಂದ ಆದ ಲಾಭವನ್ನು ದೀರ್ಘಾವಧಿ ಬಂಡವಾಳ ಲಾಭ ಎನ್ನಲಾಗುತ್ತದೆ.
ಚಿನ್ನದ ಸ್ವತ್ತುಗಳ ಮಾರಾಟದಿಂದ ಆದ ದೀರ್ಘಾವಧಿ ಬಂಡವಾಳ ಲಾಭಗಳ ಮೇಲೆ 20% ತೆರಿಗೆಯನ್ನು ಹೇರಲಾಗುತ್ತದೆ ಅದಕ್ಕೆ ಅನ್ವಯಿಸುವ ಹೆಚ್ಚುವರಿ ಶುಲ್ಕ ಹಾಗೂ ಶಿಕ್ಷಣ ಸೆಸ್ಸ್ ಅನ್ನೂ ಸೇರಿಸಿ.
ಸರಳ ಶಬ್ದಗಳಲ್ಲಿ, ನಾವು ತೆರಿಗೆಗಳನ್ನು ಇಂಡೆಕ್ಸೇಷನ್ ಜೊತೆ ಕ್ಯಾಲ್ಕುಲೇಟ್ ಮಾಡುತ್ತೇವೆ. ಇಂಡೆಕ್ಸೇಷನ್ ಪ್ರಕ್ರಿಯೆಯಲ್ಲಿ ಹಿಡುವಳಿ ಅವಧಿಯ ಸಮಯದಲ್ಲಿರುವ ಹಣದುಬ್ಬರದ ದರದ ಪ್ರಕಾರ ಹಣದುಬ್ಬರವನ್ನು ಉಬ್ಬಿಸಿ ಸ್ವಾಧೀನದ ವೆಚ್ಚವನ್ನು ನಿಯಂತ್ರಿಸಲಾಗುತ್ತದೆ.
ಮೌಲ್ಯ ಎಷ್ಟು ಹೆಚ್ಚಿರುತ್ತದೆಯೋ, ಲಾಭ ಅಷ್ಟೇ ಕಡಿಮೆ ಇರುತ್ತದೆ, ಪರಿಣಾಮವಾಗಿ ಒಟ್ಟು ತೆರಿಗೆ ಆದಾಯವು ಕಡಿಮೆ ಇರುತ್ತದೆ.